ಉದ್ದೇಶಗಳು

  • ರಾಜ್ಯದ ಪ್ರಮುಖ ನಗರಗಳಲ್ಲಿ ಆಧುನಿಕ ಸಮಗ್ರ ವಿೂನು ಮಾರಾಟ ಮಳಿಗೆಗಳನ್ನು ತೆರೆದು ಅಲ್ಲಿ ಸಾರ್ವಜನಿಕರಿಗೆ ಉತ್ತಮ ನೈರ್ಮಲ್ಯಕರ ವಾತಾವರಣದಲ್ಲಿ ತಾಜಾ, ಘನೀಕೃತ ವಿೂನು, ವಿೂನಿನ ಮೌಲ್ಯವರ್ಧಿತ ಉತ್ಪನ್ನಗಳು, ಅಲಂಕಾರಿಕ ವಿೂನು ಹಾಗೂ ಉತ್ತಮ ಗುಣಮಟ್ಟದ ವಿೂನು ಉಪಾಹಾರ ಗೃಹದ ಸೇವೆಯನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಒದಗಿಸುವುದು.
  • ಗ್ರಾಹಕರಿಗೆ ತಾಜಾ ಮತ್ತು ಘನೀಕೃತ ವಿೂನು ಮತ್ತು ವಿೂನಿನ ಉತ್ಪನ್ನಗಳನ್ನು ಉತ್ತಮ ಸ್ಥಿತಿಯಲ್ಲಿ ಹಾಗೂ ನೈರ್ಮಲ್ಯಕರ ವಾತಾವರಣದಲ್ಲಿ ಒದಗಿಸಬೇಕಾದ ಶೀತಲ ಸರಪಣಿ ಸ್ಥಾಪಿಸಿ ನಿರ್ವಹಿಸುವುದು.
  • ತಾಜಾ ಮತ್ತು ಘನೀಕೃತ ಮೀನು ಹಾಗೂ ಮೀನನ ಉತ್ಪನ್ನಗಳನ್ನು ರಫು ಮಾಡಲು ಬೇಕಾದ ಸಂಸ್ಕರಣಾ ಮತ್ತು ಸಂಸ್ಕರಣಾ ಪೂರ್ವ ಸ್ಥಾವರಗಳ ಸೌಲಭ್ಯಗಳನ್ನು ಒದಗಿಸುವುದು.
  • ಮಂಜುಗಡ್ಡೆ, ಡೀಸಿಲ್ ಮತ್ತು ಮೀನುಗಾರಿಕಾ ಸಲಕರಣೆಗಳನ್ನು ಮೀನುಗಾರರಿಗೆ ಕಡಿಮೆ ಬೆಲೆಯಲ್ಲಿ ಪೂರೈಕೆ ಮಾಡುವುದು.
  • ಪರ್ಸೀನ್ ಮೀನು ಮಾರಾಟ ಮಾಡುವ ಮುಖಾಂತರ ಮೀನುಗಾರರು ಹಿಡಿದ ಮೀನಿಗೆ ಉತ್ತಮ ಬೆಲೆ ನೀಡುವಿಕೆ.
  • ಮೀನು ಆಹಾರ ಮತ್ತು ಮೀನೆಣ್ಣೆ ಬೇಕಾದ ಸೌಲಭ್ಯ ಒದಗಿಸುವುದು.
  • ಮೀನುಗಾರಿಕಾ ಇಲಾಖೆಯ ವಸತಿ, ಮೀನು ಮಾರುಕಟ್ಟೆ ಮತ್ತು ಇತರೆ ಯೋಜನೆಗಳನ್ನು ಅನುಷ್ಟಾನಕ್ಕೆ ತರುವುದು
  • ಅಲಂಕಾರಿಕಾ ಮೀನು, ಅಕ್ವೇರಿಯಂ ಹಾಗೂ ಸಲಕರಣೆಗಳ ಮಾರಾಟ.
  • ವಿವಿದ ಮತ್ಸ್ಯಮೇಳ, ಮತ್ತು ಇತರೆ ವಸ್ತು ಪ್ರದರ್ಶಗಳಲ್ಲಿ ಭಾಗವಹಿಸಿ ಮೀನು ಸೇವನೆಯನ್ನು ಜನಪ್ರಿಯಗೊಳಿಸುವುದು.