ಹೊಸ ಯೋಜನೆಗಳು

  • ಉತ್ತರ ಕರ್ನಾಟಕದ ಪ್ರಮುಖ ನಗರಗಳಲ್ಲಿ ಹವಾನಿಯಂತ್ರಿತ ವಿೂನು ಮಾರಾಟ ಮಳಿಗೆ, ಮೀನು ಉಪಾಹಾರ ಗೃಹಗಳನ್ನು ಸ್ಥಾಪಿಸುವುದು.
  • ರಾಜ್ಯದ ವಿವಿದ ನಗರ ಮತ್ತು ಪಟ್ಟಣಗಳಲ್ಲಿ ನೈರ್ಮಲ್ಯಯುತ, ಸುಸಜ್ಜಿತ ಮೀನು ಮಾರುಕಟ್ಟಗಳನ್ನು ಆರ್ ಕೆ.ವಿ.ವೈ ಮತ್ತು ಎನ್.ಎಫ್.ಡಿ.ಬಿ ಹಾಗೂ ರಾಜ್ಯ ಸರಕಾರದ ಸಹಬಾಗಿತ್ವದೊಂದಿಗೆ ನಿರ್ಮಿಸುವುದು.
  • ಬೆಂಗಳೂರಿನಲ್ಲಿ ಜನಪ್ರಿಯವಾಗಿರುವ “ಮತ್ಸ್ಯದರ್ಶಿನಿ-ಕಬ್ಬನ್ ಪಾರ್ಕನ್ನು” ನವೀಕರಿಸಿ ಮೇಲ್ದರ್ಜೆಗೇರಿಸುವುದು.
  • ರಾಜ್ಯದ ಆಯ್ದ ನಗರ ಮತ್ತು ಪಟ್ಟಣಗಳಲ್ಲಿ ಆಧುನಿಕ “ಸಂಚಾರಿ ಮತ್ಸ್ಯದರ್ಶಿನಿ” ಮತ್ತು “ಸಂಚಾರಿ ಮೀನು ಮಾರಾಟ” ಘಟಕಗಳಿಗೆ ಚಾಲನೆ ನೀಡುವುದು.
  • ಕರಾವಳಿಯ ವಿವಿಧ ಕೇಂದ್ರಗಳಲ್ಲಿ ಆಧುನಿಕ ವಿೂನು ಸಂಸ್ಕರಣಾ ಸ್ಥಾವರ, ಮಂಜುಗಡ್ಡೆ ಸ್ಥಾವರ ಹಾಗೂ ಡೀಸಲ್ ಬಂಕ್‍ಗಳನ್ನು ಸ್ಥಾಪಿಸುವುದು.