ನಿಗಮವು ಆರ್. ಕೆ. ವಿ. ವೈ. ಯಡಿ ರಾಜ್ಯದ 17 ಸ್ಥಳಗಳಲ್ಲಿ ಸ್ಥಾಪಿಸಿದ ಹವಾನಿಯಂತ್ರಿತ ಮೀನು ಮಾರಾಟ ಮಳಿಗೆ ಹಾಗೂ ವಿೂನು ಉಪಾಹಾರ ಗೃಹಗಳು ಜನಪ್ರಿಯವಾಗಿವೆ.
ನಿಗಮವು ತನ್ನ 5 ಡೀಸೆಲ್ ಬಂಕ್ಗಳ ಮುಖಾಂತರ ಯಾಂತ್ರೀಕೃತ ಬೋಟುಗಳಿಗೆ ಡೀಸೆಲ್ ಪೂರೈಸುತ್ತಿದೆ.
ನಿಗಮವು ಉತ್ತರ ಕನ್ನಡ ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಪರ್ಸಿನ್ ವಿೂನು ಮಾರಾಟ ಕೈಗೊಂಡು ವಿೂನುಗಾರರಿಗೆ ಉತ್ತಮ ಧಾರಣೆ ನೀಡುತ್ತಿದೆ.
ನಿಗಮವು ಕರಾವಳಿಯ 6 ಕೇಂದ್ರಗಳಲ್ಲಿ ದಿನವೊಂದರ 220 ಮೆ. ಟನ್ ಸಾಮಥ್ರ್ಯದ ಮಂಜುಗಡ್ಡೆ ಉತ್ಪಾದಿಸುವ ಸ್ಥಾವರಗಳನ್ನು ಸ್ಥಾಪಿಸಿ ವಿೂನುಗಾರರಿಗೆ ನ್ಯಾಯೋಚಿತ ದರದಲ್ಲಿ ಪೂರೈಸುತ್ತಿದೆ.
ನಿಗಮವು ತಾಜಾ ಮತ್ತು ಘನೀಕೃತ ಮೀನು ಹಾಗೂ ಮೀನನ ಉತ್ಪನ್ನಗಳನ್ನು ರಪ್ತು ಮಾಡಲು ಬೇಕಾದ ಸಂಸ್ಕರಣಾ ಮತ್ತು ಸಂಸ್ಕರಣಾ ಪೂರ್ವ ಸ್ಥಾವರಗಳನ್ನು ಹಾಗೂ ಮೀನು ಆಹಾರ ಮತ್ತು ವಿೂನೆಣ್ಣೆ ಕಾರ್ಖಾನೆಗಳ ಸೌಲಭ್ಯವನ್ನು ಒದಗಿಸುವುದು.
ನಿಗಮವು ಕೇಂದ್ರ ಸರಕಾರದ ಆರ್ ಕೆ.ವಿ.ವೈ ಮತ್ತು ಎನ್.ಎಫ್.ಡಿ.ಬಿ ಹಾಗೂ ರಾಜ್ಯ ಸರಕಾರದ ಸಹಬಾಗಿತ್ವದೊಂದಿಗೆ 21 ಸ್ವಚ್ಚ, ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ರಾಜ್ಯದ ಕರಾವಳಿ ಹಾಗೂ ಒಳನಾಡು ಪ್ರದೇಶಗಳಲ್ಲಿ ನಿರ್ಮಿಸಿದೆ.
ನಿಗಮವು ಕಳೆದ 15 ವರ್ಷಗಳಿಂದ ರಾಜ್ಯ ಸರಕಾರದ ಮತ್ಸ್ಯಾಶ್ರಯ ಯೋಜನೆಯ “ನೋಡಲ್ ಏಜೆನ್ಸಿ” ಯಾಗಿ ಕಾರ್ಯನಿರ್ವಹಿಸುತ್ತಿದೆ.
ನಿಗಮವು ಗ್ರಾಮೀಣ ಮಹಿಳೆಯರಿಗೆ ಅಲಂಕಾರಿಕ ವಿೂನಿನ ಉತ್ಪಾದನೆಯಲ್ಲಿ ತರಬೇತಿ ನೀಡಿದೆ.
ನಿಗಮವು ರಾಜ್ಯದಾದ್ಯಂತ ನಡೆಯುವ ಕೃಷಿಮೇಳ, ಮತ್ಸ್ಯಮೇಳ ಹಾಗೂ ಕರಾವಳಿ ಉತ್ಸವ, ಮೈಸೂರು ದಸರಾ, ಇತ್ಯಾದಿಗಳಲ್ಲಿ ಭಾಗವಹಿಸಿದೆ.