ನಮ್ಮ ಬಗ್ಗೆ

ಕರ್ನಾಟಕ ವಿೂನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ರಾಜ್ಯ ಸರಕಾರದ ಒಂದು ಉದ್ಯಮವಾಗಿದ್ದು, ಇದನ್ನು 1970ರಲ್ಲಿ 1956ರ ಕಂಪನಿಯ ಕಾಯಿದೆಯಂತೆ ಸ್ಥಾಪಿಸಲಾಯಿತು. ನಿಗಮವು ಕಳೆದ 48 ವರ್ಷಗಳಲ್ಲಿ ವಿೂನುಗಾರರ ಮತ್ತು ವಿೂನುಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಘನೀಕೃತ ವಿೂನು ಮಾರಾಟಕ್ಕಾಗಿ ಶೀತಲ ಸರಪಣಿ ಸ್ಥಾಪನೆ, ಯಾಂತ್ರೀಕೃತ ದೋಣಿ ನಿರ್ಮಾಣ ಯಾರ್ಡ್, ಮಂಜುಗಡ್ಡೆ ಮತ್ತು ಶೈತ್ಯಾಗಾರ ಸ್ಥಾಪನೆ, ವಿೂನೆಣ್ಣೆ ಮತ್ತು ವಿೂನು ಆಹಾರ ಘಟಕ ಸ್ಥಾಪನೆ, ಪರ್ಸಿನ್ ವಿೂನು ಮಾರಾಟ ವ್ಯವಸ್ಥೆ, ಆಳ ಸಮುದ್ರ ವಿೂನುಗಾರಿಕೆ, ವಿೂನಿನ ರಫ್ತು ಹಾಗೂ ವಿೂನು ಉಪಾಹಾರ ಗೃಹ ಸ್ಥಾಪನೆ ಸೇರಿದೆ. ಪ್ರಸ್ತುತ ನಿಗಮದ ಅಧಿಕೃತ ಪಾಲು ಬಂಡವಾಳ ರೂ.20.00 ಕೋಟಿಗಳಾಗಿದ್ದು, ಸಂದಾಯವಾದ ಪಾಲು ಬಂಡವಾಳ ರೂ.17.84 ಕೋಟಿಗಳಾಗಿರುತ್ತದೆ.

ನಿಗಮದ ದೂರದೃಷ್ಟಿ :

ಸಮಗ್ರ ಗುಣಮಟ್ಟ ನಿರ್ವಹಣೆಯ ದೃಷ್ಟಿಯಲ್ಲಿ, ಸಾಮಾಜಿಕ ಕಳಕಳಿಯೊಂದಿಗೆ, ತಾಜಾ ವಿೂನು, ಘನೀಕೃತ ವಿೂನು, ಮೌಲ್ಯವರ್ಧಿತ ವಿೂನಿನ ಉತ್ಪನ್ನಗಳು, ಹಾಗೂ ‘ಶೀತಲ ಸರಪಣಿ’ ಯನ್ನು ಸದೃಢಗೊಳಿಸುವುದು.

ಒನ್ ಲೈನ್ (On-line) ಮತ್ತು ಸಂಚಾರಿ (Mobile) ಮೀನು ಮಾರಾಟ ಹಾಗೂ ಮೀನು ಉಪಾಹಾರ ಗೃಹಗಳನ್ನು ನಡೆಸುವುದು.

ಗ್ರಾಹಕರಿಗೆ ಹಾಗೂ ಮೀನು ಮಾರಾಟಗಾರರ ಅನುಕೂಲಕ್ಕಾಗಿ ನೈರ್ಮಲ್ಯಯುತ ಸುಸಜ್ಜಿತ ಮೀನು ಮಾರುಕಟ್ಟೆಗಳ ನಿರ್ಮಾಣ.

ಸಿಬ್ಬಂದಿಗಳ ಹಾಗೂ ಕೇಂದ್ರ ಮತ್ತು ರಾಜ್ಯದ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಗಳ ವೈಜ್ಞಾನಿಕ ಜ್ಞಾನವನ್ನು ಬಳಸಿಕೊಂಡು ನಿರಂತರ ಅಭಿವೃದ್ಧಿ ಪಥದೆಡೆಗೆ ಸಾಗುವುದು.

ಧ್ಯೇಯ ಧೋರಣೆ:

  • ಸಾರ್ವಜನಿಕರಿಗೆ ಸಸಾರಜನಕಯುಕ್ತ ವಿೂನು ಹಾಗೂ ವಿೂನಿನ ಉತ್ಪನ್ನಗಳನ್ನು ಒದಗಿಸುವುದು.
  • ಎಲ್ಲಾ ಚಟುವಟಿಕೆಗಳಲ್ಲಿ ಸಮಗ್ರ ಗುಣಮಟ್ಟ ನಿರ್ವಹಣೆ ನೀತಿಯನ್ನು ಅನುಸರಿಸುವುದು.
  • ಪರಿಸರ ಸ್ನೇಹಿ ವಾತಾವರಣವನ್ನು ಸೃಷ್ಟಿಸುವುದು ಹಾಗೂ ಸಾಮಾಜಿಕ ಕಳಕಳಿ ಹೊಂದಿರುವುದು.
  • ನಿರಂತರ ಆವಿಷ್ಕಾರ ಹಾಗೂ ಅಭಿವೃದ್ಧಿ ಪಥದೆಡೆಗೆ ಸಾಗುವುದು.
  • ಗ್ರಾಹಕರಿಗೆ ಸ್ಪರ್ಧಾತ್ಮಕ ಬೆಲೆಯಲ್ಲಿ ಸೇವೆ ಒದಗಿಸುವುದು.